Home
ನಾಗರೀಕರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವುದು ಪಟ್ಟಣ ಪಂಚಾಯಿತಿಯ ಮುಖ್ಯ ಧ್ಯೇಯೋದ್ದೇಶವಾಗಿರುತ್ತದೆ.
The town Panchayat was established in 1876 and was ruled by Private Administration which continued upto 1953. Since 1953, the Administration of the Town Panchayat has come under public representatives.
As of 2001 India census, Nagamangala had a population of 16,050. Males constitute 51% of the population and females 49%. Nagamangala has an average literacy rate of 71%, higher than the national average of 59.5%: male literacy is 74%, and female literacy is 67%. In Nagamangala, 12% of the population is under 6 years of ago.
Nagamangala is a town with historical background dating back to saga of Mahabharath. It was also known by name Fanipura, Manipura, Nagapura and Nagamangala. It is stated to be the capital of King Babruvahara, Son of Arjuna. The Nagamangala town is surrounded by two forts. Inside fort was stated to be constructed in 1270 and the outside fort in 1578.
The town has a number of ancient temples, and famous among them are the temples of Lord Sri Yoga Narasimha, Sri Veerabhadraswamy, Sri Bhuvaneshwara Swamy ,Goddess Kali and numerous Mantaps & Tanks. Nagamangala in earlier days used to be known as a known place for learning Sanskrit and Vedas. Peoples from surrounding area came here to learn Sanskrit & Vedas here. The village is also being called as “Chathurveda Bhatta Ratnkara Agrahara”.
Nagamangala was also known as base for Temple Architecture and manufacturing of temple jewels and other ornaments
ನಾಗಮಂಗಲ ಪಟ್ಟಣ ಹಿತ್ತಾಳೆ ಕೆಲಸ, ಕಂಚಿನ ವಿಗ್ರಹ ತಯಾರಿಕೆಗಳಿಗೆ ಈ ಪಟ್ಟಣ ಪ್ರಸಿದ್ಧವಾದದ್ದು. ಇಲ್ಲಿಯ ದೇವಾಲಯಗಳಲ್ಲಿ ಸೌಮ್ಯಕೇಶವ ಗುಡಿ ದೊಡ್ಡದು. ಇದು ಬಹುಶಃ ವಿಷ್ಣುವರ್ಧನನ ಕಾಲದ್ದು ಇದರ ನಕ್ಷತ್ರಾಕಾರದ ಜಗತಿಯ ಎತ್ತರ ಸುಮಾರು 1.4 ಮೀ. ಇದು ತ್ರಿಕೂಟಾಚಲ. ಮಧ್ಯದ ಗುಡಿ ಸೌಮ್ಯಕೇಶವನದು; ಆಚೀಚಿನವು ಅರೆಗಂಬಗಳ ಅಲಂಕರಣವಿದೆ. ಸುತ್ತಲೂ ಪ್ರಾಕಾರವಿದೆ. ಮಹಾದ್ವಾರದ ಮೇಲಿನ ದ್ರಾವಿಡ ಗೋಪುರ ಏಳು ಅಂತಸ್ತುಗಳದು. ಪಾತಾಳಾಂಕಣದಲ್ಲಿ ಶ್ರೀವೈಷ್ಣವ ಸಂಪ್ರದಾಯದ ದೇವರುಗಳು ಮತ್ತು ಆಳ್ವಾರುಗಳ ಗುಡಿಗಳಿವೆ. ದೇವಾಲಯದ ಮುಂದಿನ ಸುಂದರ ಗರುಡಗಂಬದ ಎತ್ತರ ಸುಮಾರು 16.8 ಮೀ. ಈ ದೇವಾಲಯದ ಸಮೀಪದಲ್ಲಿರುವ ನರಸಿಂಹ ದೇವಾಲಯವೂ ಹೊಯ್ಸಳರ ಕಾಲದ್ದು. ಇದು ಇಲ್ಲಿಯ ಅತ್ಯಂತ ಪ್ರಾಚೀನ ದೇವಾಲಯ ಎಂದು ಹೇಳಲಾಗಿದೆ. ಭುವನೇಶ್ವರ ದೇವಾಲಯವೂ ಹೊಯ್ಸಳರ ಕಾಲದ್ದೇ. ಆದರೆ ಇದು ಬಹಳಮಟ್ಟಿಗೆ ದ್ರಾವಿಡ ಸಂಪ್ರದಾಯದ ಕಟ್ಟಡ. ವೀರಭದ್ರ ಮತ್ತು ಭದ್ರಕಾಳಿ, ಗ್ರಾಮದೇವತೆಯಾದ ಬಡಗೋಡಮ್ಮ, ಅಕ್ಕಸಾಲಿಗರ ದೇವತೆಯಾದ ಕಾಳಮ್ಮ ಇವರ ಗುಡಿಗಳು ಇವೆ. ಊರಿನ ನಾಲ್ಕೂ ಕಡೆ ನಾಲ್ಕು ಕೆರೆಗಳುಂಟು. ಸೌಮ್ಯಕೇಶವ ಮತ್ತು ನರಸಿಂಹ ಗುಡಿಗಳ ಮಧ್ಯೆ ಜಗದೇವರಾಯನ ಅರಮನೆ ಇತ್ತು ಎಂದು ಹೇಳಲಾಗಿದೆ.ಇದರ ಸಮೀಪದಲ್ಲೆ ಒಂದು ದೊಡ್ಡ ಮಂಟಪವಿದೆ.ಇದು ಸಭಾಮಂಟಪವಾಗಿದ್ದಿರಬಹುದೆಂದು ಊಹಿಸಲಾಗಿದೆ. ಊರಿನ ಸಮೀಪದಲ್ಲಿರುವ, ಸುಮಾರು 18 ಮೀ. ವ್ಯಾಸದ ಮತ್ತು ಸುಮಾರು 0.6 ಮೀ. ಆಳದ ಕೊಳವನ್ನು ಜಗದೇವರಾಯ ಜಲಕ್ರೀಡೆಗಾಗಿ ಕಟ್ಟಿಸಿದನೆಂದು ಇಲ್ಲಿಯ ಜನ ಹೇಳುತ್ತಾರೆ. ಈ ಕೊಳದ ನಡುವೆ ಒಂದು ಮಂಟಪ ಇದೆ.
1988 ನೇ ಸಾಲಿನಿಂದ ಈವರೆಗೆ ಜನನ ಮತ್ತು 1990ನೇ ಸಾಲಿನಿಂದ ಈವರೆಗೆ ಮರಣ ದಾಖಲೆಗಳನ್ನು ಗಣಕೀಕೃತಗೊಳಿಸಿದ್ದು, ನಾಗರೀಕರು ಇನ್ನು ಮುಂದೆ ಜನನ-ಮರಣ ಪ್ರಮಾಣ ಪತ್ರಗಳನ್ನು ನಿಗಧಿತ ಶುಲ್ಕ ಪಾವತಿಸಿ ಪಡೆಯಬಹುದಾಗಿರುತ್ತದೆ.
Birth & Death records details are available in online. The citizens can view the details of Birth and Death from the year 1997 to till date.
ನಾಗಮಂಗಲ ಪಟ್ಟಣ ಪಂಚಾಯಿತಿ ಸಹಾಯವಾಣಿ ಕಾರ್ಯನಿರ್ವಹಿಸುತ್ತಿದೆ, 08234-286919 ಗೆ ಕರೆ ಮಾಡಿ ಅಥವಾ ಆನ್ ಲೈನ್ ಮುಖಾಂತರ ನಿಮ್ಮ ದೂರುಗಳನ್ನು ದಾಖಲಿಸಿ ಸಾರ್ವಜನಿಕರು ಇದರ ಉಪಯೋಗ ಪಡೆದುಕೊಳ್ಳಲು ತಿಳಿಸಲಾಗಿದೆ.
Nagamangala Town Panchayath helpline running, just dial 08234-286919 OR Register complaints through online. The citizen's can use this application.
ಅಂತರ್ಜಾಲ : http://www.nagamangalatown.gov.in/pgr/grievance-redressal.jsp
ಗಣಕೀಕರಣ: ನಾಗಮಂಗಲ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಆಸ್ತಿಗಳನ್ನು ಗುರುತಿಸಿ, ಆಸ್ತಿ ವಿವರಗಳನ್ನು ಸಂಗ್ರಹಿಸಿದ್ದು, ಮಾಹಿತಿಯನ್ನು ಗಣಕೀಕರಿಸುವ ಕಾರ್ಯ ಪ್ರಗತಿಯಲ್ಲಿರುತ್ತದೆ ಶ್ರೀಘ್ರದಲ್ಲೆ ನಾಗರೀಕರು ಇದರ ಸೌಲಭ್ಯ ಪಡೆಯಬಹುದಾಗಿರುತ್ತದೆ.
Computerisation:Properties within Nagamangala Town Panchayath limits have been identified & details have been collected & Computerisation of records is under progress.Citizens can avail this facility to pay Property Tax shortly
ಪಟ್ಟಣ ಪಂಚಾಯಿತಿಯ ಪ್ರಮುಖ ಧ್ಯೇಯೋದ್ದೇಶಗಳು ಈ ಕೆಳಕಂಡಂತಿರುತ್ತವೆ.
-
ಪಟ್ಟಣದ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸುವುದು.
-
ರಸ್ತೆಗಳು ಮತ್ತು ಸೇತುವೆಗಳನ್ನು ನಿರ್ಮಿಸುವುದು.
-
ಮನೆ ಬಳಕೆ, ಕೈಗಾರಿಕೆ ಹಾಗೂ ವಾಣಿಜ್ಯ ಉದ್ದೇಶಗಳಿಗೆ ನೀರಿನ ಸಂಪರ್ಕ ಒದಗಿಸುವುದು.
-
ಸಾರ್ವಜನಿಕರ ಆರೋಗ್ಯ ,ನೈರ್ಮಲ್ಯ ಕಾಪಾಡುವುದು.
-
ಪಟ್ಟಣದಲ್ಲಿ ದುರ್ಬಲ ವರ್ಗಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವುದು.
-
ತ್ಯಾಜ್ಯ ವಸ್ತುಗಳ ಸಂಗ್ರಹಣೆ ಮತ್ತು ವಿಲೇವಾರಿ.
-
ಪಟ್ಟಣ ವ್ಯಾಪ್ತಿಯಲ್ಲಿ ಬರುವ ಕೊಳಚೆ ಪ್ರದೇಶಗಳ ಅಭಿವೃದ್ಧಿ ಹಾಗೂ ನಗರದ ಬಡತನ ನಿವಾರಣೆ.
-
ಬೀದಿ ದೀಪ, ಬಸ್ ನಿಲ್ದಾಣ, ಸಾರ್ವಜನಿಕ ಶೌಚಾಲಯಗಳಂತ ಮೂಲ ಸೌಕರ್ಯಗಳನ್ನು ಒದಗಿಸುವುದು.
-
ಸ್ಮಶಾನ ಮತ್ತು ಸ್ಮಶಾನ ಭೂಮಿ, ಅಂತ್ಯ ಸಂಸ್ಕಾರ, ಸುಡುವಿಕೆಗೆ ಭೂಮಿ ಮತ್ತು ವಿದ್ಯುತ್ ಚಿತಾಗಾರ ಸೌಕರ್ಯಗಳನ್ನು ಒದಗಿಸುವುದು.
-
ಜನನ-ಮರಣ ನೊಂದಣಿಯು ಸೇರಿದಂತೆ ಮುಖ್ಯವಾದ ಜನನ ಮತ್ತು ಮರಣ ಅಂಕಿ ಅಂಶಗಳನ್ನು ಒದಗಿಸುವುದು.
-
ಕಸಾಯಿ ಖಾನೆಗಳ ನಿಯಂತ್ರಣ.
- ಆಸ್ತಿ ತೆರಿಗೆ, ಜಾಹಿರಾತು ತೆರಿಗೆ ಮತ್ತಿತರ ಶುಲ್ಕಗಳ ವಸೂಲಾತಿಯ ಮೇಲ್ವಿಚಾರಣೆ.
-
ರಸ್ತೆ ಮತ್ತು ಬೀದಿ ದೀಪಗಳ ದುರಸ್ಥಿ ಮತ್ತು ನಿರ್ವಹಣೆ.
-
ಅಪಾಯಕಾರಿ ರೋಗಗಳ ನಿಯಂತ್ರಣ.
"This Page is Maintained by R.Manjunath Chief Officer"
Last Updated on :27-02-2012.

